Jump to content

User:ರಾ ಸು ವೆಂಕಟೇಶ/sandbox

From Wikipedia, the free encyclopedia

ಮಾತಿನ ಮನೆ ಇದು ಕಲೆ ಸಾಹಿತ್ಯ ಸಂಸ್ಕೃತಿ ಹಾಗೂ ಸಾಮಾಜಿಕ ಕಾರ್ಯಕ್ರಮಗಳಾಗಿ ನಿರ್ಮಿತವಾದ ವೇದಿಕೆ. 2020ರ ಮಾರ್ಚ್ ಎಂಟರಂದು ಮಾತಿನ ಮನೆ ಚಾಮರಾಜಪೇಟೆಯಲ್ಲಿ ಉದ್ಘಾಟನೆಗೊಂಡಿತು. ಇದರ ಉದ್ಘಾಟನೆಯನ್ನು ನೆರವೇರಿಸಿದವರು ಶ್ರೀಮತಿ ನಾಗಲಕ್ಷ್ಮಿ ರಾಮಶೇಷ ಅವರು.

ಮಾತಿನ ಮನೆಯ ಸ್ಥಾಪಕರು ಶ್ರೀ ರಾಸು ವೆಂಕಟೇಶ. ಅವರು ಚಾಮರಾಜಪೇಟೆ ಬಡಾವಣೆಯಲ್ಲಿ ವಾಸವಾಗಿ, ತಮ್ಮದೇ ಆದ ರೀತಿಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ಹಾಗಾಗಿ ತಮ್ಮ ಮನೆಯ ಮೇಲೆ ಮಾತಿನ ಮನೆ ಎಂಬ ಸುಸಜ್ಜಿತವಾದ ವೇದಿಕೆಯನ್ನು ನಿರ್ಮಿಸಿದ್ದಾರೆ. ಇಲ್ಲಿ ಕಲೆ ಸಾಹಿತ್ಯ ಸಂಸ್ಕೃತಿ ಹಾಗೂ ಸಾಮಾಜಿಕ ಕಾರ್ಯ ಚಟುವಟಿಕೆಗಳಿಗೆ ಅವಕಾಶ ನೀಡಲಾಗುತ್ತಿದೆ. ರಾಸು ವೆಂಕಟೇಶ ಅವರಿಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಇದೆ. ಇವರು ತಾತ ಗುಬ್ಬಿ ಕಂಪನಿಯ ನಟಭಯಂಕರ ಎಂಎನ್ ಗಂಗಾಧರ ರಾಯರು. ಇವರು ವಿರೋಚಿತ ಹಾಗೂ ರೌದ್ರ ಪಾತ್ರಗಳಲ್ಲಿ ಪ್ರಸಿದ್ಧರಾಗಿದ್ದವರು. ಇಂತಹ ಹಿನ್ನೆಲೆಯಲ್ಲಿ ಜನಿಸಿ ಬಂದ ರಾಸು ವೆಂಕಟೇಶ ಕಲೆ ಸಾಹಿತ್ಯಗಳಿಗಾಗಿ ಏನಾದರೂ ಮಾಡಬೇಕು ಎಂಬ ಪಣತೊಟ್ಟು ಈ ಮಾತಿನ ಮನೆಯನ್ನು ನಿರ್ಮಿಸಿದ್ದಾರೆ. ವೃತ್ತಿಯಲ್ಲಿ ದೂರದರ್ಶನ ಕೇಂದ್ರದಲ್ಲಿ ತಾಂತ್ರಿಕ ವಿಭಾಗದಲ್ಲಿ ಇವರು ಸೇವೆ ಸಲ್ಲಿಸುತ್ತಿದ್ದರು.

ಮಾತಿನ ಮನೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 81 ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿವೆ. ನಾಟಕ, ನೃತ್ಯ, ಉಪನ್ಯಾಸ, ಹಾಸ್ಯ, ಭಕ್ತಿಗೀತೆಗಳು, ಭಾವಗೀತೆಗಳು, ಜಾನಪದ ಗೀತೆಗಳು, ಸಂಪ್ರದಾಯ ಗೀತೆಗಳು, ಯಕ್ಷಗಾನ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳು ಇಲ್ಲಿ ಜರುಗಿವೆ. ಮಾತಿನ ಮನೆಯಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಗಣ್ಯ ವ್ಯಕ್ತಿಗಳನ್ನ ಕರೆಸಿ, ಅವರ ಪರಿಚಯವನ್ನು ನಮ್ಮ ಪ್ರೇಕ್ಷಕರಿಗೆ ಮಾಡಿಕೊಡಲಾಗುತ್ತದೆ. ಅದೇ ರೀತಿ ಯುವ ಪ್ರತಿಭೆಗಳನ್ನು ಆಹ್ವಾನಿಸಿ ವೇದಿಕೆ ನೀಡಿ ಅವರಲ್ಲಿನ ಪ್ರತಿಭೆಯು ಪ್ರಚಾರಕ್ಕೆ ಬರಲು ಅವಕಾಶ ಮಾಡಿಕೊಡಲಾಗುತ್ತಿದೆ ನಾಡಿನ ಹಲವಾರು ಗಣ್ಯ ವ್ಯಕ್ತಿಗಳು ಮಾತಿನ ಮನೆಗೆ ಬಂದು ಇಲ್ಲಿನ ವಾತಾವರಣಕ್ಕೆ ಮನಸೋತಿದ್ದಾರೆ ಅಂತಹವರುಗಳಲ್ಲಿ ವೇಣುವಾದಕ ವಿದ್ವಾನ್ ಪ್ರವೀಣ್ ಗೋಡ್ಖಿಂಡಿಯವರು, ಮಾತಿನ ಮಲ್ಲ ಹಿರೇಮಗಳೂರು ಕಣ್ಣನ್, ಥಟ್ ಅಂತ ಹೇಳಿ ಖ್ಯಾತಿಯ ಶ್ರೀ ನಾ ಸೋಮೇಶ್ವರ, ಬೇಲೂರು ರಾಮಮೂರ್ತಿ ಅರಳುಮಲ್ಲಿಗೆ ಪಾರ್ಥಸಾರಥಿ, ಹಾಸ್ಯೋಪನ್ಯಾಸಕರುಗಳಾದ ಗುಂಡೂರಾವ್, ಕೆ ಪಿ ಪುತ್ತೈರಾಯರು, ಎಂ ಎಸ್ ನರಸಿಂಹಮೂರ್ತಿ,ಅಣಕು ರಾಮನಾಥ್, ಬಾಬು ಹಿರಣ್ಣಯ್ಯ, ಸಪ್ನಾ ಬುಕ್ ಹೌಸ್ ಶ್ರೀ ದೊಡ್ಡೇಗೌಡ, ಮುಂತಾದ ಗಣ್ಯವ್ಯಕ್ತಿಗಳು ಇಲ್ಲಿ ಬಂದಿದ್ದಾರೆ

ಚಾಮರಾಜಪೇಟೆ ಅಷ್ಟೇ ಅಲ್ಲದೆ ಸಾಹಿತ್ಯಾಸಕ್ತರೆಲ್ಲರ ಮನೆ ಮಾತಾಗಿದೆ ಮಾತಿನ ಮನೆ.